Jyotsa Kamat -- A Brief Biography

This biography about the author is provided for university students who have to study about Dr. Jyotsna Kamat

First Online: November 02, 2022
Page Last Updated: February 17, 2024

ಲೇಖಕಿ, ಸಂಶೋಧಕಿ, ಇತಿಹಾಸಕಾರಿಣಿ ಡಾ| ಜ್ಯೋತ್ಸ್ನಾ ಕಾಮತರು ಕನ್ನಡಿಗರ ಆಚಾರ-ವಿಚಾರಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಅವರು ಹುಟ್ಟಿದ್ದು ಸ್ವಾತಂತ್ರ್ಯಪೂರ್ವ ಸತಾರದಲ್ಲಿ ಜನವರಿ ೨೪, ೧೯೩೪ ರಂದು. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳಕೊಂಡರೂ, ತಂದೆಯವರ ಉತ್ತೇಜನದಿಂದ ವಾಚನ, ಶಿಕ್ಷಣಗಳನ್ನು ಮುಂದುವರೆಸಿದರು. ಕರ್ನಾಟಕದ ಸಾಮಾಜಿಕ ಇತಿಹಾಸವು ಅವರ ಅಚ್ಚುಮೆಚ್ಚಿನ ವಿಷಯವಾಗಿದ್ದು (ಎಂ. ಎ. ಮತ್ತು ಪಿ. ಎಚ್. ಡಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲದಿಂದ) "ಕೈಗನ್ನಡಿಯಲ್ಲಿ ಕನ್ನಡಿತಿ", "ಕರುನಾಡಿನ ಜನಜೀವನ" ಮತ್ತು "ಕರ್ನಾಟಕದ ಶಿಕ್ಷಣ ಪರಂಪರೆ" ಮತ್ತಿತರ ಮುಖ್ಯ ಕೃತಿಗಳನ್ನು ರಚಿಸಿದವರು. ಜ್ಯೋತ್ಸ್ನಾ ಅವರು ಬಹುಭಾಷಾ ಪಂಡಿತರಾಗಿದ್ದು ಮೂರು ಭಾಷೆಗಳಲ್ಲಿ (ಕನ್ನಡ, ಇಂಗ್ಲಿಷ್ ಮತ್ತು ಕೊಂಕಣಿ) ೨೩ ಸಾಹಿತ್ಯಕೃತಿಗಳನ್ನು ರಚಿಸಿದ್ದಾರೆ. ಅನೇಕ ದಶಕಗಳ ಕಾಲ ಆಕಾಶವಾಣಿಯಲ್ಲಿ ಸೇವೆ ಸಲ್ಲಿಸಿ ರೇಡಿಯೋ ಮಾಧ್ಯಮವನ್ನು ಜನರ ಹತ್ತಿರ ತರಲು ಪರಿಶ್ರಮಿಸಿದರು. ಅವರ ಪತಿ ಕೃಷ್ಣಾನಂದ ಕಾಮತರ ಪ್ರವಾಸ ಸಾಹಿತ್ಯವನ್ನು ಪ್ರಚೋದಿಸಿದರು ಮತ್ತು ಅವರ ಮಗ ವಿಕಾಸ ಕಾಮತರೊಡನೆ "ಕಾಮತ್.ಕೊಂ" ಅಂತರ್ಜಾಲ ನೆಲೆಯನ್ನು ಸ್ಥಾಪಿಸಿ ಅನೇಕರಿಗೆ ಮಾದರಿಯಾದವರು. "ಮಹಿಳಾ ಹಾಸ್ಯ" ಎಂಬ ಹೊಸ ಸಾಹಿತ್ಯ ಪ್ರಕಾರವನ್ನು ಕನ್ನಡಿಗರಿಗೆ ಪರಿಚಯಿಸಿದರು -- "ನಗೆ ನವಿಲು", "ಸಂಸಾರದಲ್ಲಿ ಸ್ವಾರಸ್ಯ" ಈ ಬಗೆಯ ಕೃತಿಗಳು. ತಮ್ಮ ಬ್ಲಾಗ್ ನಲ್ಲಿ ಮುನ್ನೂರಕ್ಕೂ ಹೆಚ್ಚಾಗಿ ಪ್ರಬಂಧಗಳನ್ನೂ, ಜೀವನ ಚರಿತ್ರೆಗಳನ್ನೂ ಬರೆದರು. ತಮ್ಮ ಉಳಿತಾಯದಲ್ಲಿ "ಕೃಷ್ಣಕಲ್ಪ" ವಾಚನಾಲಯವನ್ನು ಕಟ್ಟಿಸಿದರು. ಭಾರತದ ಮಹಿಳೆಯರ ಏಳಿಗೆಗಾಗಿ ಮಾಧ್ಯಮಗಳ ಮತ್ತು ತಮ್ಮ ಬರವಣಿಗೆಗಳ ಮೂಲಕ ಶ್ರಮಿಸಿದರು. ರಾಜ್ಯೋತ್ಸವ ಪ್ರಶಸ್ತಿ, ಚಿದಾನಂದ ಪ್ರಶಸ್ತಿ, ಅಮೇರಿಕಾದ ವಿಶ್ವ ಕೊಂಕಣಿ ಗೌರವ, ಕಿಟ್ಟೆಲ್ ಪ್ರಶಸ್ತಿಗಳನ್ನು ಜ್ಯೋತ್ಸಾ ತಾವು ಪಡೆದದ್ದಲ್ಲದೆ, ಉದಯೋನ್ಮುಖ ಕನ್ನಡಿಗರಿಗಾಗಿ "ಕಾಮತ ಪ್ರಶಸ್ತಿ"ಯೊಂದನ್ನು ಸ್ಥಾಪಿಸಿ ಅನೇಕ ನವೀನ ಸಾಧಕರಿಗೆ ಅವಕಾಶ ಕಲ್ಪಿಸಿ ಕೊಟ್ಟರು. ೨೦೨೨ ರ ಅಗಸ್ಟ್ ೨೪ ರಂದು ಜ್ಯೋತ್ಸಾ ಕಾಮತ ನಿಧನರಾದರು.

See Also:

Kamat's Potpourri Jyotsna Kamat's Home Page Jyotsna Kamat Jyotsna Kamat Biography in Kannada