Missing My Sister

Dr. Sushama Arur misses recently departed older sister Jyotsna Kamat. Expressed via a Kannada poem.

First Online: October 06, 2022
Page Last Updated: December 07, 2024

Missing My Sister, by Dr. Sushama Arur

 

ನಿನ್ನ ನೆನಪು ಎಷ್ಟ ಕಾಡ್ತದ ಎಂದ ಹೇಳಲಿ ಅಕ್ಕಾ
ನೀ ನನ್ನ ಅಂತಕರಣಾ, ಹಿರಿಯ ಚೇತನಾ,
ದಿವಸಕ್ಕ ಮಾಡೊ ಮಾತು ಕತೀ ನಿಂತ ಬಿಟ್ಟಾವ ಅಲ್ಲಾ
ಸಾಹಿತ್ಯದ ಸಂವಾದಾ ನಿಶ್ಯಬ್ದ ಆಗೆದಲ್ಲಾ


ನಾ ಈಗ ಯಾರ ಹತ್ರ ನನ್ನ ವಿಚಾರಾ ಹೇಳಕೊಳ್ಳಲೀ?
ನಾ ಹೊಸದಾಗಿ ಓದಿದ್ದು ಬರೆದದ್ದು ಯಾರ ಹತ್ರ ಓದಿ ಹೇಳಲಿ?
ನನ್ನ ಶಂಕೆಗಳ ಪರಿಹಾರ ಯಾರು ಮಾಡ್ತಾರ ?
ನನ್ನ ಕೈಯಿಂದ ಏನಾದ್ರು ಒಳ್ಳೆ ಕೆಲಸ ಆದ್ರ ಯಾರು ಬೆನ್ನ ತಟ್ತಾರ?


 


The author with her sister Jyotsna Kamat, March 2022




ನೀ ಓಡಾಡೊ ವಿಶ್ವಕೊಶದಾಂಗ
ನಿನಗ ಇದು ಒಂದು ಖಾಸ್ ವರದಾನ ಸಿಕ್ಕಾಂಗ
ಮರಿಲಾರದ ನೆನಪು! ಅದು ನನ್ನ ಭಾಗ್ಯಕ್ಕ ಇಲ್ಲಲ್ಲಾ
ಅಂತ ಇವತ್ತಿಗೂ ನನಗ ಅದರ ಕೊರತೆ ಸತಾಯಸ್ತದಲ್ಲಾ

ನೀ ಯಾವಾಗ ಒಂದಾದ ಮ್ಯಾಲ್ ಮತ್ತೊಂದು
ಸಾಲಿಯೊಳಗ ಕಲತದ್ದು ಕನ್ನಡಾ ಹಾಡು,
ಇಂಗ್ಲಿಷ ಕವಿತೆಯೊಳಗಿನ ಪಂಕ್ತಿಗಳು,
ಸಂಸ್ಕೃತ ಕಾವ್ಯಾ, ಗೋವಾದ್ದು ಕೊಂಕಣಿ ಹಾಡು
ಭಾಳ ಊಮೇದಿಂದ ಪ್ರಭಾತಫೇರ್ಯಾಗಿನ ಹಾಡು
ಹಾಡೊದ ಕೇಳಿದ್ರ ಭಾಳ ಆಶ್ಚರ್ಯ ಆಗ್ತದ ನೋಡು

ನಿನ್ನ ಆತ್ಮವಿಶ್ವಾಸಾ,,ಧಾಡಶೀ ಸ್ವಭಾವಾ ನನಗ ಭಾಳ ಸೇರತದ
ನಿನ್ನ ಮನಶಕ್ತಿ ಮತ್ತು ಶಿಸ್ತಿನ ಜೀವನಕ್ಕ ನನ್ನ ನಮಸ್ಕಾರಾ
ಸಾದಾ-ಸರಳ ಮತ್ತು ಉಚ್ಚವಿಚಾರದ ಜೀವನಕ್ಕ ನಾನು ನತಮಸ್ತಕಳು
ಅವಿವೇಕತನಕ್ಕೆ ನಿನಗಿರುವ ಅಸಹನೆ ನನ್ನ ಒಮ್ಮತ
ನಗನಗ್ತಾ ನಿನಗಾಗುವ ಯಾತನೆ ಸಹಿಸುವ ನಿನ್ನ ಸಹನಶಕ್ತಿಗೆ ನನ್ನ ಸಲಾಮ

ನಿನ್ನ ಮನಿ-ಮಠಾ ಬಿಟ್ಟು ದೂರ ನೀ
ನೌಕರಿ ಸಲುವಾಗಿ ಬಿಡಾರ ಹೂಡ್ದೀ
ಏಕಾಕಿತನಾ ಬೇಜಾರು ನಿನ್ನ ಹತ್ರ ಸುಳಿಲಿಲ್ಲಾ
ಕೆಲಸದ ಜೊತೆಗೆ ನಿನ್ನ ಬರವಣಿಗಿ ಚಾಲೂ ಇಟ್ಟಿ
ನೀ ಬರ್ದ ಭಾಳಷ್ಟು ಪುಸ್ತಕಾ ಬೆಳಕಿಗೆ ತಂದಿ

ಏಷ್ಟೋ ಜನರ ಜೀವನಾ ನೀ ಹಸನ ಮಾಡಿದಿ
ನಿನ್ನ ಆಥಿತ್ಯ ಮತ್ತು ಉದಾರ ಮನೋಭಾವದಿ
ಅದೇಷ್ಟೊ ಬಡ ಮಕ್ಕಳಿಗೆ ಶಿಕ್ಷಣಾ ದಾನ ಕೊಟ್ಟಿ
ಇಳಿ ವಯಸ್ಸಿನಲ್ಲಿ ಪುಟ್ಟ ಮಗುವನ್ನು ದತ್ತಕಾ
ತೊಗೊಂಡು
ಪ್ರೀತಿಯಿಂದ ಸಲಹಿ ಅದಕ್ಕ ಫಲಪ್ರದ ಜೀವನಾ ಕೊಟ್ಟಿ

ಆಮ್ಮಾಸ ಕಾಲಮ"ಲ್ಲಿ ನೀ ಬರ್ದ ನೂರಾರು ಐತಿಹಾಸಿಕ ಅಂಕಣಗಳು ವಿಶ್ವವಿಖ್ಯಾತ ಆಗ್ಯಾವ
ಸಂಶೋಧಕರಿಗೆ ಇದೊಂದು ಸಂಧರ್ಭಗ್ರಂಥಾ
ಇದು ನೀ ಬಿಟ್ಟು ಹೋದ ಭಾಳ ದೊಡ್ಡ ಆಕರಾ


ನಿನ್ನ ಬರವಣಿಗಿ, ಒಳ್ಳೆತನ, ನಿನ್ನ ಜೀವನಾ ಮುಂದಿನ ಪೀಳಿಗಿಗೆ ಆದರ್ಶವಾಗಲಿ.

 

See Also:

  • Articles by Dr. Sushama Arur
  • Autobiography of Jyotsna Kamat (Incomplete)
    •