Introduction to Kamat Samsmarane Function


Why we have gathered today?

ನಮಸ್ಕಾರ. ನಾನು ವಿಕಾಸ ಕಾಮತ್.

ಇಲ್ಲಿ ವೇದಿಕೆಯ ಮೇಲೆ ಮತ್ತು ಸಭೆಯಲ್ಲಿ ನೀವು ಅತಿರಥ ಮಹಾರಥರು ಸೇರಿದ್ದೀರಿ, ತುಂಬಾ ಸಂತೋಷ ನಿಮಗೆ ಕೃಷ್ಣಾನಂದ ಕಾಮತ್ ಪ್ರತಿಷ್ಠಾನದ ವತಿಯಿಂದ ಸ್ವಾಗತ ಕೋರುತ್ತೇನೆ.

ಇಲ್ಲಿರಲು ನಾನಾಗಿರುವ ಅರ್ಹತೆ ಅಂದರೆ ನಾನು ಕಾಮತ ದಂಪತಿಗಳ ಮಗ!
ಕಾಮತ ಪ್ರತಿಷ್ಠಾನವು ಈಗ ಕೆಲವು ವರ್ಷಗಳಿಂದ "ಚೌಕ ಚಕ್ರದ ಗಾಡಿ " ಆಗಿ ಬಿಟ್ಟಿದೆ -- ಅಂದರೆ ಎಲ್ಲೋ ಎಲ್ಲೂ ಹೋಗಕ್ಕಾಗಲ್ಲ -- ನಿಂತ ಕಡೆಯೇ ನಿಲ್ಲಬೇಕು! ಅದರ ಗತಿಯನ್ನು ಬದಲಾಯಿಸಬೇಕಾಗಿದೆ;

ಈ ಪ್ರಸ್ತಾವನೆಯಲ್ಲಿ ನಾವು ಯಾಕೆ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಅಂತ ಹೇಳಲು ಬಯಸುತ್ತೇನೆ.

ನನ್ನ ಅಮ್ಮರ ಕೊನೆಯ ದಿನಗಳಲ್ಲಿ ನಾನು ಅವರ ಬಳಿ ಹೇಳಿದೆ -- "ಅಮ್ಮ ಹೊಸ ಟ್ರೆಂಡಿಂಗ್ ಬಂದಿದೆ -- ಅದು ಸತ್ತ ಎಮ್ಮೆಗೆ ನೂರು ಸೇರು ಹಾಲು ಅನ್ನುವ ಬದಲು ಜೀವಂತ ಇರುವಾಗಲೇ "ಸೆಲೆಬ್ರೆಷನ್ ಆಫ್ ಲೈಫ್" ಅಂತ ಸಮಾರಂಭ ಮಾಡುತ್ತಾರೆ. ಸತ್ತ ಮೇಲೆ ಹೇಳುವ ಕಥಾವಸ್ತುವನ್ನು ಜೀವಂತವಿರುವಾಗಲೇ ಹೇಳಿಬಿಡುತ್ತಾರೆ. 'ಂದು ಪಾರ್ಟಿ ಮಾಡಿ ನಿಮ್ಮ ಆಪ್ತರನ್ನು ಕರೀಲಾ" ಅಂತ ಕೇಳಿದೆ. "ಏ ನಾನು ಸತ್ತ ಮೇಲೆ ನೀನು ಶ್ರಾದ್ಧ ಮಾಡದೇ ಇದ್ದರೂ ಪರವಾಯಿಲ್ಲ -- ಜೀವಂತ ಇರುವಾಗಲೇ ತಿಥಿ ಮಾಡಬೇಡ ಎಂದು ಬಿಟ್ಟರು, ಮತ್ತು ಅದೇನು ಹೊಸತು ಅಲ್ಲ -- ನಮ್ಮ ಕಡೆ ಯತಿ-ಸ್ವಾಮೀಜಿಗಳಿಗೆ ಅವರು ಇರುವಾಗಲೇ ಅವರ ಅಂತ್ಯಕ್ರಿಯೆ ಮಾಡುವ ಪರಿಪಾಠ ಇದೆ -- ಆ ಪೂರ್ವಾಶ್ರಮದ ವ್ಯಕ್ತಿ ಇನ್ನಿಲ್ಲ ಅಂತ ತೋರಿಸಲು --ಎಂದೆಲ್ಲ ರೀಲು ಬಿಟ್ಟು ವಿಷಯ ಬದಲಾಯಿಸಿ ಬಿಟ್ಟರು.

ಆದರೆ ನನ್ನ ತಂದೆಯವರ ಅಕಾಲ ಮರಣದ ನಂತರ -- ನನ್ನ ಅಮ್ಮನೇ ನನ್ನ ವಿರೋಧವನ್ನ್ನೂ ಮೀರಿ -- "ನಿನ್ನ ಅಪ್ಪನಂಥ ಮನುಷ್ಯರು ನಮ್ಮ ಮಧ್ಯೆ ಆಗಿ ಹೋಗಿದ್ದಾರೆ ಅಂತಾದರೂ ಜನರಿಗೆ ತಿಳಿಯುವುದು ಬೇಡವೇ? ಅಂತ ಕಾಮತ ಪ್ರತಿಷ್ಠಾನ ಪ್ರಾರಂಭಿಸಿದ್ದು. ಆ ಕಾಮತ್ ಟ್ರಸ್ಟ್ ದ ಕತೆಗಳ ಮಹಾಪೂರವೇ ಇದೆ -- ಸಂಕ್ಷಿಪ್ತವಾಗಿ ಹೇಳೋದಾದರೆ ಕಾಮತರ ಜೀವನದ ಬಗ್ಗೆ, ಅವರ ಕೃತಿಗಳ ಬಗ್ಗೆ ಮುಂದಿನ ಜನನಾಂಗಕ್ಕೆ ತಿಳುವಳಿಕೆ ಬೇಕು ಅಂತ ಅಮ್ಮ ಅನೇಕ ಚಟುವಟಿಕೆಗಳನ್ನು ಮಾಡಿದರು -- 'ಂದು ಸ್ಮಾರಕ ವಾಚನಾಲಯ ಕಟ್ಟಿಸಿದರು; ಔಟ್ ಆ ಪ್ರಿಂಟ್ ಆದ ಪುಸ್ತಕಗಳನ್ನು ಮತ್ತೆ ಮುದ್ರಿಸಿದರು ಇತ್ಯಾದಿ , ಆದರೆ ನಮಗೆ ನಾವು ಅಪೇಕ್ಷಿಸಿದ ಪ್ರತಿಫಲ ಸಿಗಲೇ ಇಲ್ಲ, ಮತ್ತು ನಾನೇ ಆಮ್ಮರಿಗೆ ಸಮಾಧಾನ ಮಾಡಬೇಕಾಯಿತು -- ಮದರ್ ಥೆರೆಸಾ ಅವರ ವಾಕ್ಯಗಳನ್ನು ಹೇಳಿ -- ನಿಮಗೆ ನೂರು ಜನರಿಗೆ ಉಣ್ಣಿಸಲು ಅಗೋಲ್ಲವೋ? ಪರವಾಗಿಲ್ಲ --'ಬ್ಬರಿಗೆ ಉಣಿಸಿ. -- ನಾವು ಕೈಲಾದುದು ಮಾಡಿದ್ದೇವಲ್ಲ ಅಮ್ಮ, ಸಾಕು ಎಂದು.

ಈ ಮಧ್ಯ ನೇಮಿಚಂದ್ರ ಮತ್ತು ಮಾಧ್ಯಮ-ಅನೇಕ ಅವರು ಅಮ್ಮನ ಸಾಕ್ಷಿಚಿತ್ರವೊದನ್ನು ತಯಾರಿಸಿ (ಅಲ್ಲಿ ಕ್ಯೂ.ಅರ.ಕೋಡ್ ಇದೆ) ಅವರ ಜೀವನದ ಸತ್ವವನ್ನು ದಾ-ಲಿಸಿ ಬಿಟ್ಟರು -- ಮಾಡುವುದೆಲ್ಲ ಮಾಡಾಯಿತಲ್ಲ ಅಂತ ನಾನು ಸುಮ್ಮನಿದ್ದೆ.

ನನ್ನ ಅಪ್ಪ 'ಂದು ಬಗೆ -- ಅವರಿಗೆ ಸಾರ್ವಜನಿಕ ಕಾರ್ಯಕ್ರಮಗಳು ಇಷ್ಟವಿರಲಿಲ್ಲ -- ಇಷ್ಟವಿಲ್ಲ ಅಂದರೆ ಹೋಗಿ ಫೋಟೋ ತೆಗೆಯುವುದು ಇಷ್ಟ -- ಆದರೆ ಭಾಗವಹಿಸುತ್ತಿರಲಿಲ್ಲ. ಎಲೆಮರೆಯ ಕಾಯಿಯಾಗಿ ಬದುಕಲು ಇಷ್ಟಪಟ್ಟವರು -- ಆಡಂಬರ, ಐಶ್ವರ್ಯಗಳಿಗೆ ಧಿಕ್ಕಾರ ಹಾಕಿ "ಪೂರ್ ಬೈ ಚಾಯ್ಸ್" ಸಾಮಾನ್ಯ ಜೀವನ ಮಾಡಿದವರು . ನನ್ನ ಅಮ್ಮ ಇನ್ನೊಂದು ಬಗೆ -- ಬಸವಣ್ಣರು "ಲೋಕದ ಡೊಂಕವ ನೀವೇಕೆ ತಿದ್ದುವಿರಿ" ಅಂತ ಬೋಧಿಸಿಯೂ ಕ್ರಾಂತಿ ಮಾಡಲಿಲ್ಲವೇ? ಹಾಗೆ ನನ್ನ ಅಮ್ಮ -- ಲೋಕದ ಡೊಂಕುಗಳನ್ನು ಸರಿ ಮಾಡಲು ಅವರಿಗೆ ಅಪರಿಮಿತ ಉತ್ಸಾಹ. "ಅನ್ಯಾಯಗಳನ್ನು ಸಹಿಸಬಾರದು -- ನಮ್ಮ ಕೈಲಾದುದನ್ನು ಬದಲಾವಣೆ ತರಲು ಯತ್ನಿಸಬೇಕು " ಎಂಬುದು ಅವರ ಅಂಬೋಣ. ಇಂಥ ಇಕ್ಕಳದಲ್ಲಿ ಸಿಲುಕಿದ್ದ ನನ್ನನ್ನು ಹೂಗೊಪ್ಪಲು ಕೃಷ್ಣಮೂರ್ತಿಗಳು -- ಶೇಷಾಶಾಸ್ತ್ರಿಗಳು -- ನೇಮಿಚಂದ್ರ, ಮಲ್ಲಿಕಾರ್ಜುನ, ಬಿ. ಕೆ. ಸುಮತಿಯವರು ಹುರಿದುಂಬಿಸಿ ಇದನ್ನು ಆಯೋಜಿಸಿದ್ದಾರೆ. ಇದು ಕಾಮತ್ ದಂಪತಿಗಳ "ಸೆಲೆಬ್ರೆಷನ್ ಆಫ್ ಲೈಫ್" -- ಅದಕ್ಕೆ ನಾನು ಆಭಾರಿ.

ಆ ಮಹದುದ್ದೇಶದಿಂದ -- ಅಂದರೆ ಕಾಮತ ದಂಪತಿಗಳ ನೆನಪು, ಹೆಸರುಗಳು ಚಲಾವಣೆಯಲ್ಲಿ ಇರಲಿ" ಎಂಬ ಉದ್ದೇಶದಿಂದ ಈ ಸಭೆಯನ್ನು ಮಾಡುತ್ತಿದ್ದೇವೆ. ಹೀಗೊಂದು ಕಾರ್ಯಕ್ರಮದ ಕಾರಣದಿಂದ ಎಷ್ರೊಂದು ಆಪ್ತರ ಪರಿಚಯ-ಮರು ಪರಿಚಯ ಆಯಿತು. ನಮ್ಮ ಮಾಧ್ಯಮಗಳು ಅವರ ಹೆಸರನ್ನು ಸ್ಮರಿಸಿದ ಹಾಗಾಯಿತು ಕಾಮತರ ಆಪ್ತರೂ, ಮಿತ್ರರೂ ಎಷ್ಟು -ುಶಿ ಯಿಂದ ತಮ್ಮ ಬಾಹುಳ್ಯ -- ಅನಾರೋಗ್ಯ - ಜವಾಬ್ದಾರಿಗಳನ್ನು ಸಹಿಸಿ ಕಾಮತ ದಂಪತಿಗಳನ್ನು ನೆನೆಸುತ್ತಿದ್ದಾರೆ -- ಅಂತ ನನಗೆ ಸಂಭ್ರಮ ಆಗುತ್ತಾ ಉಂಟು.

ಅವರ ಮಗನಾಗಿ ನನಗನಿಸುತ್ತೆ -- ಕಾಮತ ದಂಪತಿಗಳ ಜೀವನ ಮತ್ತು ಅವರ ದಾಂಪತ್ಯ, ಅವರ ಕೃತಿಗಳಿಗಿಂತ ದೊಡ್ಡದಾಗಿದೆ. ಶೀಘ್ರವಾಗಿ ಬದಲಾಗುತ್ತಿರುವ ಈ 'ತ್ತಡದ ದಿನಗಳಲ್ಲಿ, ಹೇಗೆ ನೆಮ್ಮದಿಯ ಮತ್ತು ಅರ್ಥಪೂರ್ಣ ಸಂಸಾರ ಮಾಡಬಹುದು ಅವರು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ -- ಇದು ನನ್ನ ಅಭಿಪ್ರಾಯ.

ಇಷ್ಟು ಹೇಳಿ -- "ನಾವು ಯಾಕೆ ಈ ಸಭೆಯನ್ನು ಕರೆದಿದ್ದೇವೆ" ಅಂತ ನನ್ನ ಪೀಠಿಕೆಯನ್ನು ಮುಗಿಸಿ ಶ್ರೀಮತಿ ಬಿ. ಕೆ. ಸುಮತಿಯವರಿಗೆ ಕಾರ್ಯಕ್ರಮದ ನಿರೂಪಣೆ ಮಾಡಲು ವಿನಂತಿಸಿಕೊಳ್ಳುತ್ತೇನೆ.

ಸುಮತಿಯವರು ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕನ್ನಡಿಗರಿಗೆ ಪರಿಚಿತರು; ಅವರ ಅನೇಕ ಕೃತಿಗಳು ಹೊರಬಂದಿವೆ -- ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ರಚಿಸಿದ ಜ್ಯೋತ್ನಾ ಕಾಮತರ ಜೀವನ ಪರಿಚಯ ಗ್ರಂ ಥವು ಸಧ್ಯದಲ್ಲಿಯೇ ಹೊರಬರಲಿದೆ. ಅವರಿಗೆ ಇಂದು ಮಧ್ಯಾಹ್ನ ಮೈಸೂರಿನಲ್ಲಿ ಇನ್ನೊಂದು ಜವಾಬ್ದಾರಿ ಇದ್ದರೂ , ಪ್ರೀತಿಯಿಂದ 'ಪ್ಪಿಕೊಂಡಿದ್ದಾರೆ.

(ವೇದಿಕೆಯತ್ತ ನೋಡಿ) ತಾವು ಧೀಮಂತರು ಇಲ್ಲಿ ಆಗಮಿಸಿದುದೇ ಕಾಮತರಿಗೆ ಸಂದ ಗೌರವ -- ಕಾಮತರ ಬಗ್ಗೆ ತಮ್ಮ ವಿಚಾರಗಳನ್ನು ಸಂಕ್ಷಿಪ್ತವಾಗಿ ಹಂಚಿಕೊಳ್ಳಿ ಎಂದು ಕೇಳಿಕೊಳ್ಳುವೆ. ಸ್ವಲ್ಪ ದೀರ್ಘ ಭಾಷಣಗಳನ್ನು ಬೇರೆ ತುಂಡುಗಳಾಗಿ ರೆಕಾರ್ಡ್ ಮಾಡೋಣ -- ಇಂದು ಬೇಗ ಬೇಗ ನಡೆಯೋಣ.

Kamat's Potpourri Kamat Memorial Center Introduction to Kamat Samsmarane Function