ತೆಂಗಿನಕಾಯಿ ಸುಲಿದಾದ ಬಳಿಕ ಹೊರಸಿಪ್ಪೆಯೆನ್ನು ನಾರಿನಿಂದ ಬೇರ್ಪಡಿಸಲು ನೀರು ಸುಲಭ ಲಭ್ಯವಿದ್ದಲ್ಲಿ ನೆನೆಹಾಕುತ್ತಾರೆ. ಹಸಿಯಾದ ನಾರನ್ನು ತೆಗದು ಬೇರ್ಪಡಿಸಿ ಹುರಿಯ ಸಾಮಗ್ರಿಯನ್ನು ಬೇರ್ಪಡಿಸುತ್ತಾರೆ.
ಈ ನಾರನ್ನು ಕುಟ್ಟಿ ಕುಟ್ಟಿ ಅದನ್ನು ನಯವಾಗಿಸುವುದು ಮುಂದಿನ ಕ್ರಮ.
ಕತ್ತದಿಂದ ಹುರಿ ತಯಾರಿಸಲು ಪುಟ್ಟ ಯಂತ್ರವೊಂದಕ್ಕೆ ಸಿದ್ದವಾದ ಕಚ್ಚಾನಾರಿನ ಸಾಮಗ್ರಿಯನ್ನು ಹಾಕುತ್ತಾರೆ. ಮರವೊಂದಕ್ಕೆ ಬೆಣೆ ಹಾಕಿ ಯಂತ್ರದಿಂದ ಹೊರಬಿದ್ದ ಕಚ್ಚಾ ಹುರಿಯನ್ನು ಸುತ್ತುತ್ತಾ ಹೋಗುತ್ತಾರೆ.
ಈಗ ಹೊರಬಿದ್ದ ಹುರಿ ಒರಟೊರಟಾಗಿರುತ್ತದೆ. ಥಪವಿನ ‘ಕೈಪಿಡಿ’ ಯಿಂದ ನಯಗೊಳಿಸಿ, ಬೇಕಾದ ಹುರಿಯ ಉದ್ದಳತೆಯನ್ನುಪಡೆಯುತ್ತಾರೆ.
ಈ ಹುರಿಯ ಉದ್ದಳತೆಯನ್ನು ಮಹಿಳೆಯರ ಬೆರಳುಗಳೇ ನಿರ್ಧರಿಸುತ್ತವೆ. ಬಳಿಕ ಹುರಿಯ ಸಿಂಬಿಗಳನ್ನು ಹೆಣ್ಣುಮಕ್ಕಳು ಮಾಟವಾಗಿ ಸುತ್ತುತ್ತಾರೆ.
ಈಗ ಸಿಪ್ಪೆಯಿಂದ ಹಸಿ ಹುರಿ ತಯಾರಾಗುತ್ತದೆ. ಒಣಗಿಸಿ ಮಾರಾಟಕ್ಕೆ ಆಣಿ ಮಾಡುತ್ತಾರೆ.
ಕತ್ತದ ಬಿರುಸು ನಾರಿಗೆ, ಕೈ ಬೆರಳುಗಳ ಚರ್ಮವು ಬಿರುಸಾಗಿ ಕೆಲಬಾರಿ ನಾರಿಯ ಕೋಮಲ ಕೈ ಬೆರಳುಗಳು ರಕ್ತ ಒಸರುವಷ್ಟು ಒರಟಾಗುತ್ತದೆ.
ಈಗ ಬಗೆ ಬಗೆಯ ಅಳತೆಯ ಪ್ಲಾಸ್ಟಿಕ್, ನೈಲಾನ್ ಹುರಿ ಹಗ್ಗಗಳು ಅಗ್ಗವಾಗಿದ್ದು ಕತ್ತದ ಕೈಗಾರಿಕೆಯನ್ನು ಮಾಡುತ್ತಿದ್ದ ಸಾವಿರಾರು ಗ್ರಾಮೀಣರು ನಿರುದ್ಯೋಗಿಗಳಾದರು. ಹೊಟ್ಟೆಪಾಡಿಗಾಗಿ ಪಟ್ಟಣ ಸೇರಿದರು, ಕೂಲಿ ನಾಲಿ ಮಾಡಿದರು. ಅನಾದಿ ಕಾಲದ ಕೈಗಾರಿಕೆ ಕಣ್ಮುಚ್ಚಿತು.
ಹಳ್ಳಿಹಳ್ಳಿಗಳಲ್ಲಿ ತಯಾರಾಗುತ್ತಿದ್ದ ಹಗ್ಗ, ಹುರಿಗಳ ರಾಶಿಗಳು ನಿರ್ಯಾತಕ್ಕೆ ಸಿದ್ಧವಾಗುತ್ತಿದ್ದವು.
ನೈಲೋನ್ ಹುರಿಗಳ ಕಾಲದಲ್ಲಿ ಕತ್ತದ ಹುರಿಗೆ ಏನು ಬೇಡಿಕೆ?