ಪ್ರಕಾಶಕರ ಮಾತು

ಪ್ರಕಾಶಕರ ಮಾತು

ಡಾ. ಕೃಷ್ಣಾನಂದ ಕಾಮತರ `ನಾನೂ ಅಮೇರಿಕೆಗೆ ಹೋಗಿದ್ದೆ’ ಪ್ರವಾಸ ಕಥನವು ಗ್ರಂಥಮಾಲೆಯಿಂದ ೧೯೬೯ರಲ್ಲಿ ಪ್ರಥಮವಾಗಿ ಪ್ರಕಟವಾದಾಗ ತತ್ಕ್ಷಣ ಓದುಗರ ಮೆಚ್ಚುಗೆ ಗಳಿಸಿತು. ನಂತರ ಪಠ್ಯಪುಸ್ತಕವಾಗಿ ಮತ್ತೊಂದು ಆವೃತ್ತಿಯನ್ನೂ ಕಂಡಿತು. ಈಗ ಅದನ್ನು ಮತ್ತೆ ಪುನರ್ ಮುದ್ರಿಸಿ ಓದುಗರ ಮುಂದೆ ಇಡಲು ಸಂತೋಷವೆನಿಸುತ್ತಿದೆ. ಆದರೆ ಈ ಕಾರ್ಯ ಡಾ.ಕೃಷ್ಣಾನಂದ ಕಾಮತರು ಜೀವಿತವಾಗಿದ್ದಾಗ ಆಗಿದ್ದರೆ ಇನ್ನಷ್ಟು ಸಂತೋಷವಾಗುತ್ತಿತ್ತು. ಕಳೆದ ವರ್ಷ ಆಗಸ್ಟ್ ೧೫ರ ಪುಸ್ತಕ ಬಿಡುಗಡೆಯ ಸಮಾರಂಭಕ್ಕೆ ಕಾಮತ ದಂಪತಿಗಳು ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಂಗಳೂರಿಗೆ ತಿರುಗಿದರು. ಆದರೆ ಅವರ ಜೀವನ ಇಷ್ಟೊಂದು ಅನಿರೀಕ್ಷಿತವಾಗಿ ಕೊನೆಗೊಳ್ಳುತ್ತದೆಂದು ಯಾರು ಭಾವಿಸಿರಲಿಲ್ಲ. ಫೆಬ್ರುವರಿ ೨೦ ರಂದು ಯಾವ ಮನ್ಸೂಚನೆಯನ್ನು ನೀಡದೆ ತಮ್ಮ ಜೀವನ ಪಯಣ ಮುಗಿಸಿದರು. ಅವರು ೧೫–೨–೨೦೦೨ ರಂದು ಬರೆದ ಪತ್ರ ಅವರು ತೀರಿಕೊಂಡ ೩–೪ ದಿನಗಳ ನಂತರ ಬಂದಿತು. ಅದರಲ್ಲಿ ತಮ್ಮ ಪುಸ್ತಕದ ಪುನರ್ಮುದ್ರಣ ವಿಷಯ ತಿಳಿದು ಸಂತೋಷ ಸೂಚಿಸಿದ್ದರು. ಈಗ ಅವರ ಪುಸ್ತಕವನ್ನು ಮತ್ತೆ ಓದುಗರ ಕೈಯಲ್ಲಿ ಇರಿಸಲು ಹೆಮ್ಮೆ ಎನಿಸುತ್ತದೆ.

ಡಾ। ರಮಾಕಾಂತ ಜೋಶಿ
ಸಂಪಾದಕ