ಅಂತರ್ಮುಖಿ ಶರಾವತಿ

ಜಗತ್ ಪ್ರಸಿದ್ದವಾದ ಜೋಗ್ ಫಾಲ್ಸ್‌ಗೆ ಕಾರಣಳಾದ, ಲಕ್ಷ ಲಕ್ಷ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಿ, ಲಿಂಗನಮಕ್ಕಿ ಆನೆಬೈಲು   ವಿದ್ಯುತ್ ಉತ್ಪಾದನಾ ಕೇಂದ್ರಗಳು ಆಗ್ನೇಯ ಏಷ್ಯಾ ಖಂಡದಲ್ಲೇ ದೊಡ್ಡವೆಂಬ ಖ್ಯಾತಿಗೆ ಕಾರಣಳಾದ ಶರಾವತಿ ನದಿಯ ಒಟ್ಟು ಹರಿವಿನ ಉದ್ದ ೧೨೮ ಕಿಲೋ ಮೀಟರ್ ಮಾತ್ರ!

ಶರಾವತಿ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜೀವನಾಡಿಯಾಗಿ, ಕರ್ನಾಟಕ ವಷ್ಟೇ ಅಲ್ಲದೇ ನೆರೆಯ ಗೋವ-ಮಹಾರಾಷ್ಟ್ರ ರಾಜ್ಯಗಳ ಮನೆ ಮನೆಗಳನ್ನು ಬೆಳಗಿಸಿದ ಕಾಲವೊಂದಿತ್ತು. ಈಗ ಭರದಿಂದ  ಬೆಳೆಯುತ್ತಿರುವ ಕರ್ನಾಟಕದ ಜನಸಂಖ್ಯೆ ಹಾಗೂ ಉದ್ದಿಮೆಗಳಿಗೇ ಈ ನದಿಯ ಜಲವಿಧ್ಯುತ್ ಸಾಲುತ್ತಿಲ್ಲ.

ಶರಾವತಿ ನದಿಯ   ಶಿವಮೊಗ್ಗದ ತೀರ್ಥಹಳ್ಳಿಗೆ ವಾಯುವ್ಯದಲ್ಲಿ ೧೬ ಕಿಲೋ ಮೀಟರ್ ದೂರದಲ್ಲಿ ಅಂಬು ತೀರ್ಥದಲ್ಲಿ ಉಗಮವಾಗಿದೆ. ಕ್ರಮವಾಗಿ ಹರಿದ್ರಾವತಿ, ಎಣ್ಣೆ ಹೊಳೆ ಮೊದಲಾದ ಸಣ್ಣ ದೊಡ್ಡ ಹೊಳೆಗಳು ಕೂಡಿಕೊಳ್ಳುತ್ತವೆ. ಹೊನ್ನಾವರದ ಬಳಿ ಅರಬ್ಬೀ ಸಮುದ್ರ ಸೇರಿಕೊಳ್ಳುವ ಈ ತಾಣ ಅಪರೂಪದ ಸೌಂದರ್ಯದಿಂದ ಕೂಡಿದೆ.  ನದಿ, ಸಮುದ್ರಗಳ ಜೊತೆಗೆ ಎತ್ತರದಿಂದ ಬಾಗಿ ನದಿ-ಸಮುದ್ರಗಳ ಕೂಟಕ್ಕೆ ಬಗ್ಗಿ ಸಲಾಮು ಹೊಡೆಯುವ ಸೈಹಾದ್ರಿಯ ಕಿರು ಶಿಖರಗಳೂ ನದಿಯಿಂದ ಪಾದ ತೊಳೆಸಿಕೊಂಡು ಮರು ಸಲಾಮು ಪಡೆಯುತ್ತಿವೆ!  ಈತ್ತಿಚೆಗೆ ನದಿಯಲ್ಲಿ ರೆಸೋರ್ಟ್‌ಗಳು, ಪಾರ್ಕ್‌ಗಳು ತಲೆಯೆತ್ತಿವೆ.

ಆದರೆ ನದಿಯ ಆಂತರ್ಯದ ಜಾಡು ಹಿಡಿದು ಒಳನಾಡಿನಲ್ಲಿ ದೋಣಿಗಳಲ್ಲಿ ತೇಲುತ್ತಾ ಹೋದರೆ, ಬೇರೆ ದೃಶ್ಯಗಳು ಕಣ್ಣಿಗೆ ಬೀಳುತ್ತವೆ.

ಸೂರ್ಯೋದಯದೊಂದಿಗೆ ಶರಾವತಿ ಥಲಥಳಿಸುತ್ತಾಳೆ.(ಚಿತ್ರ ೧)

ಹುಟ್ಟಿದಾರಭ್ಯ ಹುಟ್ಟುಹಾಕಿಯೇ ನಡುಬಾಗಿದ ಹಿರಿಯನೊಬ್ಬ ಸಾಮಾನು ಸಾಗಿಸಲು ದೋಣಿಯನ್ನು ಅಣಿಮಾಡುತ್ತಾನೆ.  (ಚಿತ್ರ ೨)

‘ತಾವೇನು ದೋಣಿ ಸಾಗಿಸಲು ಕಮ್ಮಿ  ಇಲ್ಲ!  ಎಂದು ಕಿರಿಯರೂ ಸಾಗುತ್ತಾರೆ. (ಚಿತ್ರ ೩)

ಎಲೆ-ಬುಟ್ಟಿಗಳೊಂದಿಗೆ (ಚಿತ್ರ ೪)!

ನದಿಯ ಎರಡೂ ಪಕ್ಕಗಳ ಗುಡಿಸಲು  ಕಣಿವೆ ಕಾಯುವ ಮಕ್ಕಳಿಗೆ ಸರಕು-ಸಾಗಾಟ-ನೀರಟಾಗಳು ಜೊತೆಯಾಗಿದ್ದರೆ  ಆಶ್ಚರ್ಯವಿಲ್ಲ.(ಚಿತ್ರ ೫)

ಮೀನ ಕೊರೆತ ನಿಮಗಿರಲಿ! ಭೋರ್ಗರೆತ ನನಗಿರಲಿ! ಎನ್ನುತ್ತದೆ. ಕಡಲು(ಚಿತ್ರ ೬)

ಅದಕ್ಕೆ ಉತ್ತರವಾಗಿ –  ಆ ಖಾರಸಾಗರದನಂದದಾಗರ(ಇರ್ಲಿ ಅತ್ಲಾಗ)

ನೀ ತೆರಿ ತೆರಿ ತೆರೆದರ ತೊನೆಯೋಣ ಬಾರ!

ಎಂದು ನದಿ ತೀರದ ತೆಂಗು ಗರಿಗಳು ಕುಣಿಯುತ್ತವೆ!

ತೆರೆಗಳೊಂದಿಗೆ – (ಭೇಂದ್ರೆಯವರ ಕ್ಷಮೆ ಕೋರಿ!)

(ಚಿತ್ರ ೭)