ಪ್ರಕಾಶ ಬುರ್ಡೆಯವರ ಕಿರುಪರಿಚಯ

ತಂದೆ ಗಣೇಶ ವಿಶ್ವೇಶ್ವರ ಬುರ್ಡೆ ಮತ್ತು . ತಾಯಿ ಶಾರದಾಬಾಯಿಯವರ ಮೂರನೆ ಸಂತಾನ.ಎರಡು ಹೆಣ್ಣುಮಕ್ಕಳ ನಂತರ, (ಉಷಾ ಮತ್ತು ಜ್ಯೋತ್ಸ್ನಾ) ೨೪ ನವೆಂಬರ ೧೯೩೮ರಲ್ಲಿ ಗದಗಿನಲ್ಲಿ (ಧಾರವಾಡ ಜಿಲ್ಲೆ) ಜನನ.
ಪ್ರಾಥಮಿಕ ಮತ್ತು. ಮಾಧ್ಯಮಿಕ ಶಿಕ್ಷಣ: ಕುಮಟಾ, ಗೋಕರ್ಣ, ಕಾರವಾರ ಮತ್ತು ಹುಬ್ಬಳ್ಳಿಯಲ್ಲಿ.
ಕಾಲೇಜು ಶಿಕ್ಷಣ: ಕೆನರಾ ಕಾಲೇಜ ಕುಮಟಾ ಹಾಗೂ ಧಾರವಾಡದ ಕರ್ನಾಟಕ ಕಾಲೇಜುಗಳಲ್ಲಿ.
೧೯೫೯ರಲ್ಲಿ ರಸಾಯನ ಶಾಸ್ತ್ರದಲ್ಲಿ ಬಿ.ಎಸ್.ಸಿ, ಆನರ್ಸ್ ಪದವಿ

ಹವ್ಯಾಸಗಳು- ವಿದ್ಯಾರ್ಥಿ ಜೀವನದಲ್ಲಿ ಎನ್.ಸಿ.ಸಿ, ಶಟಲ್ ಆಟ, ಈಜು. ನಾಟಕಗಳಲ್ಲಿ ಅಭಿನಯ, ಸಂಗೀತ ಕಚೇರಿಗಳನ್ನು ಆಲಿಸುವದು, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಲಿಕೆ, ಕಂಪನಿ ನಾಟಕಗಳನ್ನು ನೋಡುವುದು ಸಾಹಿತ್ಯಾಭಿರುಚಿ-ಕನ್ನಡ, ಇಂಗ್ಲೀಶ್, ಮರಾಠಿ ಓದುವಿಕೆ, ಮೂಲ ಶರಶ್ಚಂದ್ರರ ಬಂಗಾಲಿಯಿಂದ ಕನ್ನಡಕ್ಕೆ- ’ವಾತ್ಸಲ್” ಕಾದಂಬರಿಯ ಅನುವಾದ, ಮಾನವನ ಅವತಾರ- ಮಕ್ಕಳಿಗಾಗಿ ವಿಜಾಞ್ನ ಪುಸ್ತಕ
ವೃತ್ತಿ- ಪಿಂಪ್ರಿಯ ಹಿಂದುಸ್ಥಾನ ಆಂಟಿಬಯೊಟಿಕ್ಸನಲ್ಲಿ ತನ್ನ ಮೊಟ್ಟ ಮೊದಲ ವೃತ್ತಿ. ಬಳಿಕ ಗ್ಲಾಕ್ಸೋ ಔಷಧ ಕಂಪನಿಯಲ್ಲಿ ಮೊದಲು , ಪ್ರತಿನಿಧಿಯಾಗಿ ಕ್ರಮೇಣ ಪದೋನ್ನತಿನ್ಯಾಶನಲ್ ಸೇಲ್ಸ್ ಮ್ಯಾನೇಜರ್ ಎಂದು ಭೋಪಾಲ್, ನಾಗಪೂರ್, ಮುಂಬಯಿ, ಪುಣೆ ಮುಂತಾದ ಶಹರಗಳಲ್ಲಿ ವರ್ಗಾವಣೆ ಸಮಯಕ್ಕಿಂತ ಮುಂಚಿತವೇ ನಿವೃತ್ತಿ. ೧೯೯೨

ಸಂಸಾರ– ಅಂಜನಿ ಬಳವಳ್ಳಿಯವರೊಂದಿಗೆ ೨೭ ಮೇ ೧೯೬೪ ಮುಂಬಯಿಯಲ್ಲಿ ವಿವಾಹ. ಇಬ್ಬರು ಮಕ್ಕಳು-ಮಗ ಶುಭಾಂಗ – ಮಗಳು-ಅಪರ್ಣಾ. ಸೊಸೆ ಪ್ರೀತಿ ಮತ್ತು ಮೊಮ್ಮಕ್ಕಳು ಅಮೇಯ – ಗೌರಿ. ಮಕ್ಕಳು, ಮೊಮ್ಮಕ್ಕಳಿಗೆ ಸಂಗೀತದಲ್ಲಿ ಅಭಿರುಚಿ ಇದೆ .
ಸಾಧನೆಗಳು- ಸಂಗೀತ ವಿಮರ್ಶಕರೆಂದು (೧೯೮೪ರಿಂದ)ಟೈಮ್ಶ್ ಆಫ್ ಇಂಡಿಯಾ ಮತ್ತು ಇಕೊನೊಮಿಕ ಟೈಮ್ಸನಲ್ಲಿ ಸೇವೆ. ಕರ್ನಾಟಕ ಸಂಘದ ಸಾಂಸ್ಕೃತಿಕ ವೇದಿಕೆ, ’ಕಲಾಭಾರತಿಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ.ಸಂಗೀತ-ನಾಟಕ-ನೃತ್ಯ ಕಾರ್ಯಕ್ರಮಗಳ ಸಂಘಟಕರು. (ಸುಮಾರು ೧೦೫೬ ಕಾರ್ಯಕ್ರಮಗಳ ಆಯೋಜನೆ) ಆಕಾಶವಾಣಿ ಮತ್ತು ದೂರದರ್ಶನ್, ಮುಂಬಯಿ , ಶಾಸ್ತ್ರೀಯ ಮತ್ತು ಲಘು ಸಂಗೀತದ ಹಾಡುಗಾರರ ಅಡಿಶನ್ ಮತ್ತು ಗ್ರೆಡೆಶನ್ ಕಮಿಟಿಯ ಪ್ರಮುಖ ಸದಸ್ಯರು. ಕೆನರಾ ಸಾರಸ್ವತ ಅಸೋಸಿಯೇಶನ್ನಿನ ಸಂಗೀತ ಸಮ್ಮೇಳನಗಳ ಸಂಯೋಜಕರು, ದೃಕ್-ಶ್ರಾವ್ಯ ಕಾರ್ಯಕ್ರಮಗಳ ಸಂಘಟಕರಾಗಿ ಎರಡು ದಶಕ ಸೇವೆಭಖಿಲ.ಆದಿತ್ಯ ಬಿರ್ಲಾ ಪ್ರತಿಷ್ಠಾನದ ಅಖಿಲ ಭಾರತ ಪ್ರಶಸ್ತಿಗಳ ನಿರ್ಣಾಯಕ ಸಮಿತಿಯ ಸದಸ್ಯರಾಗಿ ಎರಡು ದಶಕಗಳ ಸೇವೆ.

ಪ್ರಶಸ್ತಿಗಳು– ೧) ಮ್ಯೂಸಿಕ್ ಫೋರಮ್ ಅವಾರ್ಡ್-ಮುಂಬಯಿ
೨)) ಸಂಗೀತ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ್ದಕ್ಕೆ ಗೌರವ ಪುರಸ್ಕಾರ- ಕನ್ನಡ ಸಾಹಿತ್ಯ ಪರಿಷತ್-ಮಹಾರಾಷ್ಟ್ರ ಘಟಕ ಮತ್ತು ಕರ್ನಾಟಕ ಸಂಘದಿಂದ- ೨೦೦೮ ಜನೆವರಿ ೬.
೩) ಮುಂಬಯಿ ಕನ್ನಡಿಗರ ಮಹತ್ವದ ಸಾಧನಾ ಪುರಸ್ಕಾರ-ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ, ಮುಂಬಯಿ- ೨೦೧೨ ಏಪ್ರಿಲ್ ೭.
೪)ಸಾಧನಾ ಶಿಖರ ಗೌರವ ಪ್ರಶಸ್ತಿ-೨೦೧೩-ಸಂಗೀತ ಕ್ಷೇತ್ರದಲ್ಲಿಸಾಧಿಸಿರುವ ಅನುಪಮ ಸಾಧನೆಗಾಗಿ.
೫) ೧೦ ನೇ ಅಖಿಲ ಭಾರತ ಕನ್ನಡ ಸಾಹಿತ್ಯ-ಸಂಸ್ಕೃತಿ ಸಮ್ಮೇಳನ- ಡೆಲ್ಹಿ ಕನ್ನಡಿಗ ಮಾಸಪತ್ರಿಕೆ ಹೊಸ ಡೆಲ್ಹಿ ೨೦೦೬ ಡಿಸೆಂಬರ ೨೩-ಸಂಗೀತ ವಿಮರ್ಶೆ ಕ್ಷೇತ್ರದಲ್ಲಿಗೈದ ಸಾಧನೆಗಾಗಿ.
೬) ಕರ್ನಾಟಕ ಸರಕಾರ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು (ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಏಪ್ರಿಲ್ ೨೦೧೫-ಪುರಸ್ಕಾರ.
೭) ಆದಿತ್ಯ ವಿಕ್ರಮ ಪುರಸ್ಕಾರ
೮) ಸ್ವರಾಂಕಿತ ಪ್ರಶಸ್ತಿ -೨೦೧೬ ಜನೆವರಿ ೩೦