ಚರ್ಮ ವಾದ್ಯಗಳು

ಇಂದಿನ ದಿನಗಳಲ್ಲಿ ಬಾಸ್ ಡ್ರಮ್, ಬೊಂಗೋ, ಟೆಂಬೋರಿನ್ ಕಬಾಕ ಮೊದಲಾದ ವಿದೇಶಿ ವಾದ್ಯಗಳು ಪರಿಚಿತವಾಗುತ್ತಿವೆ. ಆದರೆ ಬಗೆಬಗೆಯ ಹಾಡುಗಾರಿಕೆಗೆ ಸಹವಾದ್ಯಗಳಾಗಿ ಎಡೆಬಿಡದೆ ಬಳಸುತ್ತ ಬಂದ ಹಲವಾರು ನಮ್ಮದೇ ಆದ ವಾದ್ಯಗಳು ಅಷ್ಟೊಂದು ಪರಿಚಿತವಿರಲಾರವು. ಸಹಸ್ರಾರು ವರ್ಷಗಳಿಂದ ಭಾರತೀಯ ಸಂಗೀತದ ಅನ್ಯೋನ್ಯ ಭಾಗವಾಗಿ ಬೆಳೆದು, ಉಳಿದು ಬಂದಿರುವ ಎಲ್ಲಾವರ್ಗದ ಜನರಿಗೆ ಸಂಭ್ರಮದ ಸಂಧರ್ಭಗಳಲ್ಲಿ ಮುದನೀಡುತ್ತ ಬಂದ ಹಲವು ವಾದ್ಯಗಳಿವೆ.

Kamat.com-leather-instrument

ಕರ್ನಾಟಕದ ಪ್ರಸಿದ್ದ ಅರಸುಮನೆತನವಾದ ಕಲ್ಯಾಣದ ಚಾಲುಕ್ಯರ ಮುಮ್ಮಡಿ ಸೋಮೇಶ್ವರ ಭೂಲೋಕಮಲ್ಲನು (12ನೇ ಶತಮಾನ) ಆಳಿದ್ದು ಅಲ್ಪಕಾಲವಾದರೂ, ಸಂಗೀತಲೋಕಕ್ಕೆ ಬಲು ದೊಡ್ಡ ಕೊಡುಗೆ ಬಿಟ್ಟು ಹೋಗಿದ್ದಾನೆ. ಮದ್ಯಯುಗದ ವಿಶ್ವಕೋಶದಂತಿದ್ದ ಅವನಮಾನಸೋಲ್ಲಾಸದಲ್ಲಿ ವಾದ್ಯಗಳು ಗೀತವಾದ್ಯ ನೃತ್ಯಗಳ ಸುಂದರ ಸಮನ್ವಯ ವೇಳೆಯೇ ಸಂಗೀತಕ್ಕೆ ಮೀಸಲಾಗಿದೆ. ಸಂಪನ್ನ ಸಂಗೀತ! ಎಂದು ಆತ ನಂಬಿದ್ದ, ಹೀಗಿನ ಶಾಸ್ತ್ರೀಯ ಅರೆಶಾಸ್ತ್ರೀಯ, ಸುಗಮ, ಜಾನಪದ ಇತ್ಯಾದಿ ಕೃತ್ರಮ ಭೇದದಲ್ಲಿ ಆತನ ವಿಶ್ವಾಸವಿದ್ದಂತಿಲ್ಲ. ಕಿವಿಗೆ ಇಂಪಾದ ಸಂಗೀತವನ್ನು ಚೆನ್ನಾಗಿ ಬಲ್ಲ ರಸಿಕ ವೃಂದದೊಂದಿಗೆ ಆಲಿಸಿ ಖುಷಿಪಡುವವರ ಜೊತೆಗೆ, ಸಮಾಜದ ವಿವಿಧ ವರ್ಗದವರು ತಾವೇ ರೂಪಿಸಿಕೊಂಡ ವಿಧಿವಿಧಾನಗಳಲ್ಲಿ ಹಾಡಿ ಕುಣಿದು ಸಾಮೂಹಿಕವಾಗಿ ಹಬ್ಬ ಹುಣ್ಣಿಮೆ ಇತರ ಸಂಧರ್ಭಗಳನ್ನು ಆಚರಿಸುವುದು ಅವನಿಗೆ ಅಷ್ಟೆ ಮುಖ್ಯವಾಗಿತ್ತು. ಹೀಗಾಗಿ ಚಿರಪರಿಚಿತ ಮೃದಂಗವೂ ಸೇರಿದಂತೆ 18 ಪ್ರಕಾರದ ಚರ್ಮಗಳನ್ನು ಅವನು ಹೆಸರಿಸಿದ್ದಾನೆ.Kamat.com-leather-instrument

 

ಫಟಹ, ಢಕ್ಕೆ, ಘಳಸ, ತಮಟೆ, ಕರಟೆ, ಮರ್ದಳೆ (ಮೃದಂಗ) ತ್ರಿವಳಿ, ರುಂಜೆ, ಕುಡುವೆ, ಸೆಳ್ಳುಕೆ, ಘಟ, ಢಕ್ಕುಳಿ, ಡಮಸ, ದುಂದುಭಿ, ನಿಸ್ಸಾಳ, ಭೇರಿ, ಮುಂತಾದವೇ ಆ ವಾದ್ಯಗಳು. ಬಗೆಬಗೆಯ ಮರಗಳಿಂದ ಬೇರೆ ಬೇರೆ ಪ್ರಾಣಿಯ ಚರ್ಮಗಳಿಂದ ಅವನ್ನು ನಿರ್ಮಿಸುವ ವಿಧಾನವನ್ನು ನುಡಿಸುವ ಬಗೆಗಳನ್ನು ಅವನು ಬಣ್ಣಿಸಿದ್ದಾನೆ.

ಇವೆಲ್ಲಾ ‘ಆನದ್ದ‘ (ಬಾರಿಸುವ) ವಾದ್ಯಗಳಾಗಿದ್ದವು. ಮೃದಂಗವು ಒಡಗೂಡಿಸಿದರೆ ಇತರ ವಾದ್ಯಗಳ ಕಳೆಯೇರುತ್ತದೆ. ಆದ್ದರಿಂದ ಮೃದಂಗವು ಮುಖ್ಯವಾದ ‘ನಾದಶೋಭಕರ‘ ವಾದ್ಯವೆನಿಸಿದೆ.

ಈ ಎಲ್ಲಾ ವಾದ್ಯಗಳನ್ನು ತಯಾರಿಸುವ ವಿಧಾನಗಳನ್ನು ಅಳತೆಗಳೊಂದಿಗೆ ಮನಸೋಲ್ಲಾಸದಲ್ಲಿ ಕಾಣಬಹುದು. 1405 ಪದ್ಯಗಳಲ್ಲಿ ಮಧ್ಯಯುಗದಲ್ಲಿ ಪ್ರಚಾರದಲ್ಲಿದ್ದ Kamat.com-leather-instrumentತಂತು, ಚರ್ಮ, ವಾದ್ಯಗಳ ಜೊತೆಗೆ ಊದುವ ವಾದ್ಯಗಳ ವರ್ಣನೆಯನ್ನು ನೋಡಬಹುದಾಗಿದೆ. ಸತ್ತಕರುವಿನ ಚರ್ಮ ಕತ್ತೆಯ ಚರ್ಮವನ್ನು ಬಳಸಲಾಗುತ್ತಿತ್ತು. ಒಂದೇ ಕೈಯಿಂದ, ಎರಡು ಕೈಯಿಂದ, ಜಿಂಕೆ ಕೊಂಬಿನಿಂದ ತಯಾರಿಸಿದ ದಂಡಗಳಿಂದ ನುಡಿಸುತ್ತಿದ್ದರು.

ಶಿಲ್ಪಗಳಲ್ಲಿ ವಾದ್ಯ ಪ್ರಕಾರಗಳನ್ನು ಗುರುತಿಸುವುದು ಕಷ್ಟ. ನಡುವಿಗೆ ಬಟ್ಟೆಯನ್ನು ಕಟ್ಟಿಕೊಂಡು, ಹೆಗಲು ಮತ್ತು ಸೊಂಟಗಳಿಗೆ ತೂಗಿಸಿಕೊಂಡು ಎರಡು ಬದಿಯಿಂದ ನುಡಿಸಬಹುದಾದ ‘ಕರಟ’ ವಾದ್ಯ ತುಂಬ ಜನ ಪ್ರಿಯವಿದ್ದಂತೆ ತೋರುತ್ತದೆ. ಕರ್ನಾಟಕ್ ಉದ್ದಗಲಕ್ಕೂ ಹರಡಿಕೊಂಡಿರುವ ದೇವಾಲಯಗಳ ಪ್ರಕಾರಗಳಲ್ಲಿ, ಒಳಹೋರಾಂಗಣ ಚಿತ್ರ ಪಟ್ಟಿಕೆಗಳಲ್ಲಿ ಕಂಡುಬರುವ ವಾದ್ಯ ಇದೇ ಆಗಿದೆ.

Kamat.com-leather-instrument

 

*ಹಲಸು, ಮಾವು, ಖದಿರ, ಗಟ್ಟಿ ಬಿದಿರುಗಳಿಂದ ವಾದ್ಯಗಳಿಂದ ತಯಾರಿಸುತ್ತಿದ್ದರು.